ಹೇಳಿಕೊಳ್ಳುವಂತದ್ದಲ್ಲದಿದ್ದರೂ, ಇದೂ ಒಂದು ಕಾರಣವಾದ್ದರಿಂದ ಹೇಳುತ್ತಿದ್ದೇನೆ. ಭಂ ಬೋಲೆಯನ್ನ ಮುಗಿಯುವವರೆಗೆ ಬರೆಯುತ್ತೇನೆಂಬ ಹುಮ್ಮಸ್ಸಿನಲ್ಲಿ ಶುರುಮಾಡಿದ್ದೇನೋ ನಿಜ. ಆದರೆ ಕೆಲಸದ ಹಾಗು ಬಿಡುವಿಲ್ಲದ ಕೆಲವು ಅನಿವಾರ್ಯ ಬದ್ಧತೆಗೆ ನನ್ನನ್ನೊಪ್ಪಿಸಿಕೊಂಡಿದ್ದರಿಂದ ಶುರುಮಾಡಿದ್ದನ್ನ ಮುಗಿಸಲಾಗಲಿಲ್ಲ. ಹಾಗಂತ ಇಲ್ಲಿಗೇ ಇದನ್ನ ಬಿಡುವುದಿಲ್ಲ. ಅಪರೂಪಕ್ಕೆ ಒಂದು ಭಾಗವನ್ನ ಪೋಸ್ಟ್ ಮಾಡುವುದರಿಂದ ಓದಲು ರಗಳೆಯಾಗುತ್ತದೆ ಎಂಬ ಕಾಳಜಿಯಿಂದ ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದೇನೆ. ಭಂ ಬೋಲೆಯನ್ನ ಅದರಷ್ಟಕ್ಕದು ಹಾಳೆಯ ಮೇಲೆ ಸಮಯ ಸಿಕ್ಕಾಗೆಲ್ಲ ಬರೆದುಕೊಳ್ಳುತ್ತೇನೆ. ಅದು ಒಂದು ಹಂತಕ್ಕೆ ಸಮಾಧಾನವಾಗುವಷ್ಟು ಬರೆದಮೇಲೆ ಮತ್ತೆ ಪೋಸ್ಟ್ ಮಾಡುವ ಸಾಹಸಮಾಡುತ್ತೇನೆ. ಬರೆದ ಎಷ್ಟೋ ಬರಹಗಳು ಮೂಲೆ ಸೇರಿಕೊಂಡಿವೆ. ಅವುಗಳನ್ನ ಜೀರ್ಣೋದ್ಧಾರ ಮಾಡುವುದೂ ಒಂದು ಮುಖ್ಯ ಕೆಲಸವಾಗುವುದರಿಂದ ಭಂಬೋಲೆಗೆ ಬ್ಲಾಗಿನಿಂದ ಸದ್ಯಕ್ಕೆ ಮುಕ್ತಿ ಕೊಡುತ್ತಿದ್ದೇನೆ. ಭಂ ಬೋಲೆಗೆ ಬೆನ್ನುತಟ್ಟಿದ ಎಲ್ಲರ ಕ್ಷಮೆಯಿರಲಿ.
ದಿನಸಿಬರಹಗಳಿಗೂ ನಿಮ್ಮ ಕೃಪೆಯಿರುತ್ತದೆಂದು ಬಯಸುತ್ತ ಹೊಸಹೆಜ್ಜೆಯಿಡುತ್ತಿದ್ದೇನೆ.
Confusion is Happiness.
No comments:
Post a Comment