Sunday, 30 September 2012

ಭಂ ಬೋಲೆ ೨


ಭೆತ್ತೆಯೆಂಬ ಹಲವು ರಾತ್ರಿಗಳ ಮೊದಲ ರಾತ್ರಿ



ಊರಲ್ಲಿ ವಿದ್ಯುತ್ ಇಲ್ಲಯಾವುದೇ ಸರ್ಕಾರಿ ಸವಲತ್ತುಗಳಿಲ್ಲಸರ್ಕಾರಿ ಸಂಸ್ಥೆಗಳೂ ಇಲ್ಲಹೆಸರಿಗಷ್ಟೇ ಅದೊಂದು ಊರು. ಪ್ರಮುಖ ವಾಹಿನಿಯ ಯಾವ ಲಕ್ಷಣಗಳೂ ಇಲ್ಲದ ಅಸಂಬದ್ಧ ಸಮುದಾಯ ಅದು. ಅಲ್ಲಿಯವರ ಜೀವನ ಶೈಲಿಅವರ ಸಂಪ್ರದಾಯಗಳು ಎಲ್ಲವೂ ಕಾಡು ಜನಾಂಗದ ಬದುಕಿನಿಂದ ಪ್ರೇರಣೆ ಪಡೆದವೇನೋ ಎನಿಸುವಷ್ಟು ವಿಚಿತ್ರ. ಸಮಾಜದ ಬಹುಮುಖ್ಯ ಆದರ್ಶವಾಗಿರುವ ಮದುವೆಯೆಂಬ ಪದ್ಧತಿ ಅವರಲ್ಲಿಲ್ಲ. ಹಾಗಂತ ಅಲ್ಲಿ ಹೆಣ್ಣು ಗಂಡುಗಳಿಲ್ಲವೆಂದಲ್ಲಅಲ್ಲಿ ಮಕ್ಕಳು ಜನಿಸುವುದಿಲ್ಲವೆಂದಲ್ಲ. ಅಲ್ಲಿ ಮದುವೆ ಎಂಬುದು ಮಾತ್ರ ಇಲ್ಲ. ಸಮಾಜದ ಎಲ್ಲ ಸೌಲಭ್ಯಗಳಿಂದ ಹೊರತಾದ ಊರಲ್ಲಿನ್ಯಾಯ ಹೇಳಲು ಒಬ್ಬ ನಾಯಕನಿದ್ದಾನೆ,ಅವನ ನಂತರದಲ್ಲಿ ಅವನೇ ಗುರುತಿಸುವ ಮತ್ತೊಬ್ಬನು ಗುಂಪಿಗೆ ನಾಯಕನಾಗುತ್ತಾನೆ.ಹಾಗೆ ಅವನು ಗುರುತಿಸಿದವನ ಹೊರತು ಮತ್ತಾರು ಸ್ಥಾನವನ್ನ ನಿಭಾಯಿಸುವಂತಿಲ್ಲ. ಹೆಣ್ಣುಮಗು ಹರೆಯಕ್ಕೆ ಬಂದರೆಮೊದಲು ಅವಳು ನಯಕನನ್ನೇ ವರಿಸಬೇಕು. ಸಮುದಾಯದಲ್ಲಿ ಮತ್ತೊಬ್ಬಳು ಹೆಣ್ಣುಮಗಳು ವಯಸ್ಸಿಗೆ ಬರುವವರೆಗೂ ಇವಳೇ ಅವನ ಹೆಂಡತಿಯಾಗಿರುತ್ತಾಳೆ. ಅವನ ಜೊತೆಯಲ್ಲಿ ಜೀವನ ಮುಗಿದಮೇಲೆ ಅವಳು ಸ್ವತಂತ್ರಳು. ಸ್ವತಂತ್ರಳಾದಮೇಲೆ ಮತ್ತೆ ಅವಳು ನಾಯಕನನ್ನ ಎಂದಿಗೂ ಕೂಡುವಂತಿಲ್ಲ. ಅದು ಅಲ್ಲಿಯ ಅಲಿಖಿತ ನಿಯಮ. ಕಾಮ ಅಲ್ಲಿಯ ಅವಶ್ಯಕತೆಯಷ್ಟೆ. ಸ್ವತಂತ್ರಳಾದ ಹೆಣ್ಣುಮಗಳು ಯಾರೊಂದಿಗೂ ಇರಬಹುದು. ಏಕೆಂದರೆ ಅಲ್ಲಿ ಮನೆಯೆಂಬ ಚೌಕಟ್ಟೂ ಇಲ್ಲ. ಇಡೀ ಸಮುದಾಯವೇ ಒಂದು ಮನೆ. ವಾಸಿಸಲು ಅನುಕೂಲವಾಗುವಂತೆ ಕೆಲವು ಸೂರುಗಳನ್ನ ಅಲ್ಲಿ ನಿರ್ಮಿಸಿಕೊಂಡಿದ್ದಾರೆಯೇ ವಿನಹ ಅದು ಯಾವುದೂ, ಯಾರ ಮನೆಯೂ ಅಲ್ಲ.

ಅಂತಹ ಊರಲ್ಲಿ ಅಂದು ಸಂಭ್ರಮ ಶುರುವಾಗಿತ್ತು. ಅಂದು ಅಲ್ಲಿ ಭೆತ್ತೆಯ ದಿನ. ಹರೆಯಕ್ಕೆ ಬಂದ ಹುಡುಗಿ ನಾಯಕನನ್ನ ಸೇರುವ ಕಾರ್ಯಕ್ರಮಕ್ಕೆ ಭೆತ್ತೆ ಎಂದು ಹೆಸರು. ಊರಲ್ಲಿ ಅಂದು ಸುಮೇರಿ ವಯಸ್ಸಿಗೆ ಬಂದಳು ಎಂಬುದು ಗೊತ್ತಾಗಿತ್ತುಅಲ್ಲಿಯವರೆಗೆ ಮುಖ್ಯಸ್ಥನಾದ ಅರವತ್ತೆರಡರ ಹರೆಯದ "ಗೀರ" ಹೆಂಡತಿಯಾಗಿದ್ದವಾಡಿಕೆಯಲ್ಲಿ ಸುಮೆರಿಯ ದೊಡ್ಡಮ್ಮನ ಮಗಳಾದ "ಗೋಪಿಕೆಗೆ ಸ್ವಾತಂತ್ರ್ಯದ ದಿನಗೋಪಿಕೆಗೆ ಇಪ್ಪೊತ್ತೊಂದರ ಹರೆಯಸುಮೇರಿ ಹದಿನಾರಕ್ಕೆ ಕಾಲಿಟ್ಟಿದ್ದಳು.
 ಅಂದು ಭೆತ್ತೆಗೆ ಅಲ್ಲಿ ಸಕಲ ಸಿದ್ಧತೆ ನಡೆದಿತ್ತುಬೆಳಗಿನಿಂದ ಅಲ್ಲಿ ಎಲ್ಲರಿಗೂ ಭೆತ್ತೆಯದೇ ಸಡಗರಊರಿನ ಯುವಕರು ಅಂದು ಬೇಟೆಗೆ ಹೋಗಿದ್ದರುಬೇಟೆಯೆಂದರೆ ಅವರು ಹೇಗಾದರೂ ಮಾಡಿ ಗರ್ಭಿಣಿ ಜಿಂಕೆಯನ್ನ ಬೇಟೆಯಾಡಬೇಕುಭೆತ್ತೆ ಹತ್ತಿರಬರುತ್ತಿದ್ದಂತೆಯೇ ಕಾಡಿನಲ್ಲಿ ಓಡಾಡಿ ಅಂತಹದೊಂದು ಜಿಂಕೆಯನ್ನ ಹುಡುಕಿ ಅದರಮೇಲೆ ನಿರಂತರವಾಗಿ ನಿಗಾ ಇಟ್ಟಿರುತ್ತಾರೆಭೆತ್ತೆಯ ದಿನದಂದು ಅದನ್ನ ಜೀವಂತವಾಗಿ ಹಿಡಿದು ಯುದ್ಧ ಗೆದ್ದ ಸಂಭ್ರಮದಲ್ಲಿ  ಜಿಂಕೆಯನ್ನ ಹೊತ್ತು ತರುವುದು ಅಲ್ಲಿಯ ಹುಡುಗರಿಗೆ ಪರಮಾದ್ಭುತದ ವಿಷಯಹಾಗೆ ನಿಗಾವಹಿಸಿದ ಜಿಂಕೆಯನ್ನ ಹಿಡಿಯಲು ತುಂಡು ಯುವಕರ ಗುಂಪೊಂದು ಕಾಡಿಗೆ ಹೋಗಿತ್ತುಊರಿನ ಸ್ವತಂತ್ರ ಹೆಂಗಸರೆಲ್ಲಸಹಚಾರಿಣಿಯಾಗಲಿರುವ ಹೆಣ್ಣುಮಗಳ ಜಳಕದ ಕಾರ್ಯಕ್ರಮಕ್ಕೆ ತಯಾರಿ ಶುರುಮಾಡಿದ್ದರು. ಸುಮೇರಿ ಅಲ್ಲಿ ಎಲ್ಲರ ನೆಚ್ಚಿನ ಹುಡುಗಿ. ಅವಳು ಬಾಲ್ಯದಿಂದಲೂ ತನ್ನದೇ ಆದ ಶೈಲಿಯಲ್ಲಿ ಬೆಳೆದವಳು. ಯಾವ ಬೇಲಿಯಿಲ್ಲದಂತೆ, ನಿರ್ಭೀಡೆಯಿಂದ ಚೆಲ್ಲು ಚೆಲ್ಲಾಗಿ ವಿಹರಿಸಿದವಳು. ಒಂದು ಕಡೆಯಲ್ಲಿ ಭೆತ್ತೆಗೆ ಸಿದ್ಧತೆ ನದೆಯುತ್ತಿದ್ದರೆ ಅವಳು ಊರಿನಿಂದ ಸ್ವಲ್ಪ ದೂರದಲ್ಲಿಯೇ ಇದ್ದ ತೊರೆಯ ಬಳಿ ಹೋಗಿದ್ದಳು. ಅದು ಅವಳ ಬಹಳ ಇಷ್ಟದ ಜಾಗ. ಅಲ್ಲಿ ಸಾಮಾನ್ಯವಾಗಿ ಹೊತ್ತಿನಲ್ಲಿ ಯಾರೂ ಇರುವುದಿಲ್ಲ. ಏಕಾಂತವೇ ಅವಳಿಗೆ ಹಿಡಿಸಿದ್ದು.

ತೊರೆಯ ತಟದಲ್ಲಿಕಟ್ಟಿಗೆಯಲ್ಲಿ ನಾಜೂಕಾಗಿ ಕೆತ್ತನೆ ಮಾಡಿದ ಗೆಜ್ಜೆಕಟ್ಟಿಕೊಂಡುಹರಿವ ನೀರೊಳಗೆ ಪಾದ ಮುಳುಗುವಷ್ಟು ಕಾಲನ್ನ ಇಳಿಬಿಟ್ಟುಕೈಯಲ್ಲಿ ಹದವಾಗಿ ಬೆಳೆದುಕೊಂಡಿದ್ದ ತಟದ ಹುಲ್ಲನ್ನ ಗೀರುತ್ತಹಗಲುಗನಸಲ್ಲಿ ಹುಸಿನಗುತ್ತಅವಳು ಮೈ ಮರೆತಿದ್ದಳುಇಳಿಸಂಜೆಯ ತೀಳಿಬೆಳಕಲ್ಲಿಅವಳ ಮೂಗುತಿಯ ಹವಳಮತ್ತೊಂದು ಸೂರ್ಯನಂತೆ ಮಿನುಗುತ್ತಿತ್ತುಬಾನು ಕೆಂಪೇರುವ ಮೊದಲಿನ ಅರೆಹಳದಿ ಬಣ್ಣದಲ್ಲಿ ತುಂಬಿದ ಕೆನ್ನೆಗಳು ಜೇನುಸುರಿವ ಪಿಂಗಾಣಿ ಬಟ್ಟಲಂತೆ ಹೊಳೆಯುತ್ತಿದ್ದರೆ ಕೆನ್ನೆಗಳನ್ನ ಕಿವಿಯಲ್ಲಿ ತೂಗುಬಿಟ್ಟಿದ್ದ ಚಚ್ಚೌಕದ ಕಟ್ಟಿಗೆಯ ಓಲೆ ಗಾಳಿಗೆ ಬಾಗಿ ಬಾಗಿ ಮುತ್ತಿಡುತ್ತಿತ್ತುವಯಸಿಗೆ ಬಂದ ಅವಳ ಮೈಯನ್ನ ಕೆಂಪು ಕುಪ್ಪುಸ ಮುಚ್ಚಿತ್ತುಮೊಣಕಾಲವರೆಗೆ ಹಸಿರು ಲಂಗ ಪಕ್ಕದ ಹುಲ್ಲುಹಾಸನ್ನೂ ಮೀರುವಷ್ಟು ಸುಂದರವೆನಿಸಿದರೂ ಅದರ ಕೆಳಗಿನ ಅವಳ ಹಾಲುಬಣ್ಣದ ನೀಳ ಕಾಲುಗಳೇ ಕಣ್ಸೆಳೆಯುತ್ತಿದ್ದವುಮುಂಗುರುಳ ಕಳ್ಳಾಟಕ್ಕೆಅದರದ ಅದುರುವಿಕೆಗೆನಗುವಲ್ಲಿ ಸುಮ್ಮನೆ ಹಿಗ್ಗಿಕುಗ್ಗುವ ಗಲ್ಲದ ಚಟುವಟಿಕೆಗೆ ಅಲ್ಲಿ ಕೊನೆಯಿರಲಿಲ್ಲಅವಳ ಪಾದವನ್ನ ಸಾದ್ಯಂತವಾಗಿ ಸವರಿ ಸಾಗುತ್ತಿದ್ದ ತೊರೆತುಸುದೂರದಲ್ಲೇ ಇಳಿಜಾರ ತಿರುವಲ್ಲಿ ತಿರುಗುವ ರಭಸಕ್ಕೆ ಮಂಜಿನ ಮಬ್ಬನ್ನ ಸೃಷ್ಟಿಸಿತ್ತು.
ವಯೋ ವ್ರದ್ಧನೊಬ್ಬ ಕುದುರೆಯನ್ನೇರಿ ತೊರೆ ತಟದಲ್ಲಿಯೇ ಬರುತ್ತಿದ್ದುದು, ಅವಳನ್ನ ಕಲ್ಪನಾಲೋಕದಿಂದ ವಾಸ್ತವಕ್ಕೆ ತಂದಿತು. ಕುದುರೆ ಸ್ವಲ್ಪ ಹತ್ತಿರವಾಗುತ್ತಿದ್ದಂತೆಯೇ ಅದರ ಸವಾರ ಯಾರೆಂಬುದು ಅವಳಿಗೆ ಅರ್ಥವಾಗಿತ್ತು.
..............................................................................
ಸಾಯಂಕಾಲ ಕಳೆದು ರಾತ್ರಿ ಕಾಲಿಡುತ್ತಿತ್ತು. ಊರಿನದೇ ಆದ ನ್ರತ್ಯ ತಂಡವೊಂದು, ತಾಲೀಮು ಮುಗಿಸಿ, ಬಯಲು ಸಭೆಯ ಬಯಲಿನಲ್ಲಿ ನ್ರತ್ಯ ಆರಂಭಿಸಿತ್ತು. ಡೋಲು, ಬೊಂಬಿನ ವಾದ್ಯ, ಹಿತ್ತಾಳೆ ಪಾತ್ರೆಯ ಪಕ್ಕವಾದ್ಯಗಳ ಸಂಗೀತ ಸಂಜೆಯನ್ನ ಕಳೆಕಟ್ಟುತ್ತಿದ್ದವು. ಮಕ್ಕಳು ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದವು. ಅಲ್ಲಿ ಎಲ್ಲರಿಗೂ ಹಬ್ಬದ ವಾತವರಣ. ಹಿರಿಯ-ಕಿರಿಯರೆಂಬ ಭೇದಭಾವವಿಲ್ಲದೆ ಎಲ್ಲರು ಆನಂದದಲ್ಲಿ ಸಡಗರದಲ್ಲಿ ಪಾಲ್ಗೊಂಡಿದ್ದರು. ಸೋಮರಸ ಸಿದ್ದವಾಗಿ ಗೀರನ ಅನುಮತಿಗೆ ಕಾಯುತ್ತಿತ್ತು. ಗೀರ ಎಂದಿನಂತೆ ತನ್ನ ಖುರ್ಚಿಯಲ್ಲಿ ಗಂಭೀರವಾಗಿ ಕುಳಿತಿದ್ದ.
ಸುಮೇರಿಗೆ ಮಾವಿನೆಲೆಯ ನೀರಲ್ಲಿ ಮೂರುಬಾರಿ ಸ್ನಾನ ಮಾಡಿಸಲಾಯಿತು. ಆಮೇಲೆ ಬೆಳದಿಂಗಳ ಸ್ನಾನವೂ ಆದಮೇಲೆ, ಪದ್ಧತಿಯಂತೆ ಕೆಂಪು ಸೀರೆ ಉಡಿಸಿದರು. ಗೀರನ ಮನೆಯ ಎದುರುಗಡೆಯಲ್ಲಿ ಊರಿನ ಆರಾಧ್ಯ ದೈವವಿದೆ. ಸುಮೆರಿಯನ್ನ ಅಲ್ಲಿಗೆ ಕರೆದುಕೊಂಡುಹೋಗಿ ಪೂಜೆಯನ್ನ ಮಾಡಿಸಿದರು. ಸುಮೇರಿ ಎಲ್ಲವನ್ನೂ ಯಾಂತ್ರಿಕವಾಗಿ ಮಾಡುತ್ತಿದ್ದಳು. ಎಲ್ಲವೂ ತನ್ನ ಬದುಕಲ್ಲಿ ನಡೆಯಲೇಬೇಕಾದ ಸಂಗತಿಯೇನೊ ಅಂದುಕೊಂಡು ಅವಳು ನಿರ್ವಹಿಸಿದಳು. ಅವಳಲ್ಲಿ ಕುತೂಹಲವೂ ಇರಲಿಲ್ಲ, ತಿರಸ್ಕಾರವೂ ಇರಲಿಲ್ಲ. ಆಳು ಎಷ್ಟೇ ನಿರ್ಭಾವುಕಳಾಗಿದ್ದರೂ ಅವಳ ಸಹಜ ಸೌಂದರ್ಯ ಕೆನ್ನೆಗೆ ಲೆಪಿಸಿದ ಅರಿಶಿನದಿಂದಾಗಿ ಅವಳು ಉತ್ಸಿತಳೇ ಎಂಬಂತೆ ಕಾಣುತ್ತಿತ್ತು. ದೇವರಿಗೆ ಪೂಜೆಯಾದಮೇಲೆ ಬಲಿಯಾಗಬೇಕು. ಬಲಿಯೇ ಗರ್ಭಿಣಿ ಜಿಂಕೆ. ಎಲ್ಲರೆದುರಲ್ಲಿ ಬಲಿಯೂ ಅನಾಯಾಸವಾಗಿ ನಡೆದುಹೋಯಿತು. ಅಲ್ಲಿಂದ ಸುಮೇರಿಯನ್ನ ಸಭೆಗೆ ಕರೆತಂದರು. ಗೀರ, ರಾಜಗಾಂಭೀರ್ಯದಲ್ಲಿ ಅವಳ ಆಗಮನವನ್ನೇ ಎದುರುನೋಡುತ್ತಿದ್ದ. ಅವನಿಗೆ ಹಲವು ಭೆತ್ತೆಗಳು ಆಗಿದ್ದರೂ ಸುಮೇರಿ ಊರಿನ ಅಪರೂಪದ ಚೆಲುವೆ. ಬರಿಯ ಚೆಲುವೊಂದೇ ಆಗಿದ್ದರೆ, ಅವಳೂ ಸಾಮನ್ಯ ಹೆಣ್ಣುಮಗಳಾಗಿರುತ್ತಿದ್ದಳು. ಸುಮೇರಿ ಬುದ್ಧಿವಂತೆಯೂ ಹೌದು. ವಿರಳವೆಂಬಂತೆ ಅವಳಿಗೆ ಭೇಟೆಯಾಡುವ ಕಲೆಯೂ ಸಿದ್ಧಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವಳ ಆರನೇಯ ಇಂದ್ರಿಯ ಕೆಲಸಮಾಡುತ್ತಿತ್ತು.ಅವಎದ್ದುಳು ವೇದಿಕೆಯನ್ನ ಪ್ರವೇಶಿಸುತ್ತಿದ್ದಂತೆಯೇ ಸಭಿಕರೆಲ್ಲರ ಗಮನ ವೇದಿಕೆಯತ್ತ ನೆಟ್ತಿತು. ಗೀರನಿಗೆ ಅರವತ್ತು ದಾಟಿದ್ದರೂ ಅವನ ಶರೀರ ಕುಂದಿರಲಿಲ್ಲ. ಮಾಂಸಲಗಳು ಇಳಿಬಿದ್ದಿರಲಿಲ್ಲ. ಕಾಮ ಕಡಿಮೆಯಾಗಿರಲಿಲ್ಲ. ಸರಿಯಾಗಿ ಆರು ಅಡಿಯ ಅಜಾನಬಾಹು ಆತ. ಸುಮೇರಿಯನ್ನ ನೋಡಿದವನೇ ಎದ್ದುಬಂದು ತನ್ನ ಕೊರಳಲ್ಲಿದ್ದ ಕಟ್ತಿಗೆ ಸರವನ್ನ ಅವಳ ಕೈಗಳನ್ನ ತನ್ನತ್ತ ಸೆಳೆದು ಅದರಲ್ಲಿತ್ತ. ಸ್ಪರ್ಶದಲ್ಲಿಯೇ ಸುಮೇರಿಗೆ ಕಾಮದ ವಾಸನೆ ಬಡಿದಿತ್ತು. ಜೊತೆಯಲ್ಲಿ, ಇದೇ ಕೈಗಳು ಖಡ್ಗ ಹಿಡಿದಂತೆಯೂ ಅವಳಿಗನಿಸಿತು. ಅಷ್ಟೊತ್ತಿಗಾಗಲೆ ಗೀರ ಅವಳ ತಲೆಸವರಿದನಾದ್ದರಿಂದ ಹಾಗೆ ಬಂದ ಆಲೋಚನೆಯಿಂದ ಅವಳು ಹೊರಬಂದಳು.

ಅವಳ ಹಣೆಗೆ ಗರ್ಭಿಣಿ ಜಿಂಕೆಯ ರಕ್ತದ ತಿಲಕವನ್ನಿಟ್ಟು, ಅವಳನ್ನ ಅಲ್ಲಿಯವರೆಗೆ ಕರೆತಂದಿದ್ದ ಹೆಂಗಸರಿಗೆ ಸನ್ನೆಮಾಡಿದ. ಅವನ ಸನ್ನೆಯನ್ನರಿತ ಅವರು ಸಭೆಯನ್ನ ಸೇರಿಕೊಂಡರು. ಎಲ್ಲರಿಗೂ ಭರ್ಜರಿ ಮಾಂಸದ ಊಟ ಸಿದ್ಧವಿತ್ತು. ಗೀರ ಕಾರ್ಯಕ್ರಮದ ಕೊನೆಯಭಾಗವಾದ ಸೋಮರಸ ಸೇವನೆಗೆ ಚಾಲನೆ ನೀಡಿದ. ಎಲ್ಲರೂ ಅದಕ್ಕಾಗಿಯೇ ಕಾದಿದ್ದರೇನೊ ಎನುವಂತೆ ಮುಗಿಬಿದ್ದು ಸೋಮರಸದಾಸರಾದರು. ಮಂಜ ಗೌರಿಯನ್ನ ಕರೆದ, ಲಾವಣಿ ಗುಲ್ಯನಿಗೆ ಸನ್ನೆಮಾಡಿದಳು. ಬಿಡ್ತ ರಾಧೆಯ ಕೈ ಸವರಿದ ಹೀಗೆ ಜೋಡಿಗಳು ಉನ್ಮತ್ತರಾದವು. ಪದ್ಧತಿಯಂತೆ ಗೋಪಿಕೆ ಸುಮೇರಿಯನ್ನ ಗೀರನ ಕೋಣೆಗೆ ಕಳುಹಿಸಿ, ತನ್ನ ಸ್ವಾತಂತ್ರ್ಯಕ್ಕಾಗೇ ಕಾಯುತ್ತಿದ್ದ ಗಜೇಂದ್ರನನ್ನು ಸೇರಿದಳು.
ಸೋಗಿಯಿಂದ ಮಾಡಿದ ಕೋಣೆಯ ಮಧ್ಯದಲ್ಲಿ ಐದು ಅಡಿ ಎತ್ತರದ ಕಂಬದಮೇಲೆ ದೀಪವನ್ನಿರಿಸಲಾಗಿತ್ತು. ಹಳದಿ ಬಟ್ಟೆಯಿಂದ ಸಿಂಗರಿಸಿದ್ದ ಮಂಚದ ಕೆಳಗೆ ಒಂದು ಕಾಲನ್ನ ಇಳಿಬಿಟ್ಟು, ಮತ್ತೊಂದು ಕಾಲನ್ನ ಮಡಚಿ ಕುಳಿತಿದ್ದ ಸುಮೇರಿಗೆ ಗೋಪಿಕೆ ಹೇಳಿದ ಗೀರನೊಂದಿಗಿನ ಮೊದಲ ಅನುಭವ ನೆನಪಾಯಿತು. ಅಪರಿಚಿತ ಸಂದರ್ಭವನ್ನ ಹೇಗೆ ಎದುರಿಸುವುದೆಂಬ ಅಳುಕು ಅವಳಲ್ಲಿತ್ತು. ಗೋಪಿಕೆಯ ನೋವು, ಗೀರನಲ್ಲಿಯ ಮೃಗೀಯ ಧಾಳಿ,ಎಲ್ಲ ಒಮ್ಮೆಗೆ ನೆನಪಾಗಿ ಸುಮೇರಿ ಕ್ಷಣಮಾತ್ರಕ್ಕೆ ನಲುಗಿದಳು. ಹುಟ್ಟು ಧೈರ್ಯವಂತೆಯಾಗಿದ್ದ ಅವಳನ್ನ ಭಯ ಹೆಚ್ಚುಹೊತ್ತು ಕಾಡಲಿಲ್ಲ. ಮಂಚದ ಎಡಗಡೆಯಲ್ಲಿ ಒಂದು ಬಟ್ಟಲಲ್ಲಿ ಎಣ್ಣೆ ಹಾಗೂ ಮತ್ತೊಂದು ಬಟ್ಟಲಲ್ಲಿ ಸುವಾಸನೆಭರಿತ ಹೂಗಳಿಂದ ಮಾಡಿದ ದ್ರವವನ್ನ ಇರಿಸಲಾಗಿತ್ತು. ಸುಮೇರಿ ಎಲ್ಲವನ್ನೂ ನಾಜೂಕಾಗಿ ಗಮನಿಸಿದಳು. ಕೋಣೆಯ ಎದುರುಬದಿಯ ಗೋಡೆಯಮೇಲಿನ ಕೋಣದಮುಖದ ಎಲುಬನ್ನ ನೋಡಿದಳು. ಅದು ಗೀರನ ಅಭಿರುಚಿಯನ್ನ ತೋರಿಸುವಂತಿತ್ತು. ಮುಖದ ಕೆಳಗಡೆಯಿದ್ದ ಬಾಗಿಲಿನಿಂದ ಗೀರ ಒಳಗೆ ಬಂದ. ಸುಮೇರಿ ಎಚ್ಚೆತ್ತಳು.
ಮಂಚದಮೇಲೆ ಎಂದೂ ನೋಡದ ಸುಂದರಿಯೊಬ್ಬಳನ್ನ ಅವನು ನೋಡುತ್ತಿದ್ದ. ಅಕ್ಷರಶಃ ಅವಳು ಅಂತಹದೆ ಸುಂದರಿ. ಮಂದ ಬೆಳಕು, ಸಿದ್ಧವಾದ ಹಾಸಿಗೆ, ಅದರಮೇಲೆ ಸುಮೇರಿ ಎಲ್ಲವು ಅವನೇ ತದಮಾಡಿದನೆಂದು ಅಣುಕಿಸಿದಂತೆ ಅವನಿಗನಿಸಿತು. "ನಿನ್ನ ಬಗ್ಗೆ ಕೇಳಿದ್ದೆ, ನಿನ್ನನ್ನ ಅಗಾಗ ಗುಟ್ಟಾಗಿ ಗಮನಿಸಿಯೂ ಇದ್ದೆ. ನಿನ್ನ್ ಸ್ವಭಾವದ ಪರಿಚಯವೂ ನನಗಿದೆ. ಆದರೆ ಇಷ್ಟು ಹತ್ತಿರದಲ್ಲಿ, ನನ್ನವಳನ್ನಾಗಿಯೇ ನಿನ್ನನ್ನ ನೋಡುತ್ತಿರುವುದು ನನ್ನಲ್ಲಿ ಹೊಸ ಯವ್ವನ ತಂದಂತೆ ಆಗಿದೆ" ಎನ್ನುತ್ತ ಮಂಚದಮೇಲೆ ಅವಳ ಪಕ್ಕದಲ್ಲಿಯೇ ಬಂದು ಕುಳಿತ. ಅವಳು ಸುಮ್ಮನೆ ಅವನತ್ತ ತಿರುಗಿದಳು.
"ಎಂಥ ಸುಂದರಿ ನೀನು, ಹದಿನೇಳು ಭೆತ್ತೆ ನೋಡಿದ್ದೇನೆ ನಾನು. ಆದರೆ ನಿನ್ನನ್ನ ಸೇರದೆಯೇ ನಾನು ಸತ್ತುಹೋಗಿದ್ದರೆ, ನಾನು ಬದುಕಿದ್ದು ವ್ಯರ್ಥವಾಗುತ್ತಿತ್ತು. ನನ್ನ ಸಾವಿಗೆ ಮೊದಲೆ ನಿನಗೆ ಹರೆಯ ತಂದ ದೇವರಿಗೆ ನನ್ನ ಅನಂತಾನಂತ ಪ್ರಣಾಮಗಳು" ಎನ್ನುತ್ತ ತನ್ನೆರಡೂ ಕೈಗಳಿಂದ ಅವಳ ಭುಜವನ್ನ ಅದುಮಿದ.
"ನನ್ನಲ್ಲಿ ಪ್ರಶೆಗಳಿವೆ" ಮಾತಿನಲ್ಲಿಯೇ ತಾಳು ಎಂದಿದ್ದಳು.
ಅವನ ಜೀವಿತಾವದಿಯಲ್ಲಿ ಯಾರೂ ಅವನನ್ನ ಅನುಮಾನದಲ್ಲಿ ಪ್ರಶ್ನಿಸಿರಲಿಲ್ಲ. ಅದರಲ್ಲಿಯೂ ಭೆತ್ತೆಯ ದಿನ ಅವನ ಮಾತಿನ ಹೊರತಾಗಿ ಮತ್ತೊಂದು ಮಾತನ್ನೂ ಅವನು ಕೇಳಿರಲಿಲ್ಲ. ಅವಳ ನೇರ ಸ್ವಭಾವದ ಬಗ್ಗೆ ಕೇಳಿದ್ದರೂ ತನ್ನನ್ನ ಪ್ರಶ್ನಿಸಲಾರಳೆಂದೇ ಅವನು ಎಣಿಸಿದ್ದು. "ಸರಿ ಕೇಳು ಆದರೆ ಹೆಚ್ಚು ಸಮಯವಿಲ್ಲ" ಎಂದವನ ಧ್ವನಿಯಲ್ಲಿ ಅಸಹನೆಯಿತ್ತು.
"ಒಂದೇ ಪ್ರಶ್ನೆಯಲ್ಲಿ ಮುಗಿಸುತ್ತೇನೆ. ನಿಮಗೆ ಮತ್ತು ಊರಿಗೆ ಭೆತ್ತೆಯ ಅವಶ್ಯಕತೆ ಇದೆಯೆ?" ಎಂದಳು. ಅವಳಿಂದ ಪ್ರಶ್ನೆಯನ್ನ ಅವನು ಊಹಿಸಿರಲಿಲ್ಲ. ಅವಳು ಕೇಳಿದ ಪ್ರಶ್ನೆ ಮುಂದೊಂದು ದಿನ ಇದೇ ಊರಲ್ಲಿ ಕ್ರಾಂತಿಮಾಡಲೂಬಹುದೆಂದು ಒಮ್ಮೆಗೇ ಅವನಿಗನಿಸಿತು. ತನ್ನ ಸಾರ್ವಭೌಮತ್ವಕ್ಕೆ ಇದು ಧಕ್ಕೆ ತಂದರೂ ತರಬಹುದೆಂಬ ಆಲೋಚನೆ ಅವನಲ್ಲಿ ಮಿಂಚಿತು. ಆದರೂ ಸುಧಾರಿಸಿಕೊಂಡು ಹೇಳಿದ "ಇದು ಯಾರ ವಶ್ಯಕತೆಯಲ್ಲ, ನನ್ನ ಚಪಲವೂ ಅಲ್ಲ, ಹಿರಿಯರು ಮುಂದಾಲೋಚನೆಯಿಂದ ಮಾಡಿದ ಒಂದು ಒಳ್ಳೆಯ ಕಟ್ಟಳೆಯಷ್ಟೇ. ಊರಲ್ಲೇ ಜಗಳ, ಗಲಭೆ, ವೈಮನಸ್ಸು, ಹಗೆ ಹೀಗೆ ನಮ್ಮೊಳಗೇ ವೈರಿಗಳು ಹುಟ್ಟಬಾರದೆಂಬ ಕಾರಣಕ್ಕೆ ಹೀಗೊಂದು ಸಂಪ್ರದಾಯ ಮಾಡಿದ್ದಾರೆ. ವಯಸ್ಸಿನಲ್ಲಿ, ಅನುಮಾನ, ಸಂದೇಹ ಸಹಜ. ಬಲಿಯದ ಬುದ್ಧಿ ಬಲವಂತವಾಗಿ ಕ್ರಾಂತಿಯನ್ನ ಬಯಸುತ್ತದೆ. ಹಾಗಂತ ಕ್ರಾಂತಿಯೂ ಅದರ ಅವಶ್ಯಕತೆಯಾಗಿರುವುದಿಲ್ಲ. ಅಂತರಾಳ ಅರಿಯದೆ, ದೇವರೂ ಸುಳ್ಳೆಂದು ಹೇಳಬಹುದು. ಹಾಗಂತ ದೇವರು ಸುಳ್ಳೆ?" ವಿಷಯದ ಹರಿವನ್ನ ಬದಲಿಸಲು, ಸುತ್ತಿ ಬಳಸಿ ಅವಳಿಗೇ ಪ್ರಶ್ನೆಯಿಟ್ಟು ಸಮಾಧಾನ ಮಾಡಿಕೊಂಡ. ಅವನ ಮಾತಿನ ಶೈಲಿ, ಉದಾಹರಿಸಿದ ರೀತಿ, ಮತ್ತು ತಾನು ಸಣ್ಣವಳೆಂದು ಹೇಳಿದ ಅವನ ಮಾತಿಗೆ ಅವಳು ಮತ್ತೆ ಪ್ರಶ್ನೆ ಮಾಡದಂತಾದಳು. ಅವಳ ಮೌನವನ್ನರಿತ ಗೀರ "ಮತ್ತೇನಾದರೂ ಪ್ರಶ್ನೆಯಿದೆಯೇ" ಎಂದು ಕೇಳಿದ. ಅವಳ ಮೌನ ಮುಗಿದಿರಲಿಲ್ಲ. ದೇವರು ಸುಳ್ಳೇ ಎಂಬ ವಾಕ್ಯ ಅವಳನ್ನ ಕಾಡಿತು. ಅವನ ಕೈಗಳು ಅವಳ ಸೊಂಟವನ್ನ ಬಳಸಿ ಬಿಗಿದುಕೊಂಡಿತು. ಅವಳ ಕೊರಳಲ್ಲಿ ಅವನ ಬಿಸಿಯುಸಿರು ಹೊರಳಾಡಿತು. ತನ್ನ ಕಾಲ್ಬೆರಳಲ್ಲಿಯೇ ಅವಳ ಅಂಗಾಲ ಗೀರಿ, ಅವಳ ಹುಕ್ಕುಳನ್ನ ಮೀಟಿದ ಗೀರನ ಕಲೆಗೆ ಅವಳು ನಿರುತ್ತರಳಾದಳು. ಅಪ್ಯಾಯತೆಯಲ್ಲಿ ಅವಳನ್ನ ಆಲಿಂಗಿಸಿ ಅಂಗಾತವಾಗಿ ಮಲಗಿಸಿ ಅವಳ ಕೆನ್ನೆಯನ್ನ ನಾಲಗೆಯಲ್ಲಿ ತೀಡಿದ. ಅವಳ ಅದರಗಳು ಬರಿಯ ಕೆನ್ನೆಯನ್ನ ತಾಕಿದ್ದಕ್ಕೆ ಕೋಪಿಸಿಕೊಂಡಂತೆ ಅದುರಿದವು. ಅದರದ ಜೇನು ಅವನ ಪಾಲಾದವು. ಮುಂಗುರುಳ ಸರಿಸಿ ಕಿವಿಯನ್ನ ಕಚ್ಚಿದ. ಅವನ ಬೆನ್ನ ಹುರಿಯ ಮೇಲೆ ಅವಳ ಬೆರಳುಗಳು ಸರಾಗವಾಗಿ ಮಿಡಿದವು. ಅವಳ ಪಾದದಿಂದ ಮುತ್ತಿಡುತ್ತ, ಮೊಣಕಾಲು, ಕಿಪ್ಪೊಟ್ಟೆ, ಹುಕ್ಕುಳು ಹೊಟ್ಟೆ ದಾಟಿದನಂತರ ಗೀರನ ಕಣ್ಣು ಅವಳ ಎದೆಯಲ್ಲಿ ನಾಟಲು, ಸೆರಗು ಅವಳಿಂದ ಕದಲಲು, ಕಂಬದಮೇಲಿದ್ದ ಎಣ್ಣೆಯ ದೀಪ ಮುಂದಿನದೆಲ್ಲದಕ್ಕೂ ಸಾಕ್ಷಿಯಾಯಿತು.

Tuesday, 25 September 2012

ಪಟ್ಟಾಭಿಶೇಕ




ತೆಳುವಾಗಿ ಹರಡಿದ ಬೆಳದಿಂಗಳ ಹೊರತಾಗಿ ಅಲ್ಲಿ ಬೆಳಕಿರಲಿಲ್ಲ. ನಡು ರಾತ್ರಿ ಮೀರಿಹೋಗಿತ್ತು. ಕಾಡು ಸ್ಮಶಾನ ಮೌನ ಹೊದ್ದು ತಣ್ನಗೆ ಮಲಗಿತ್ತು. ಕಾಡಿನ ಚರಾಚರಗಳು ಗುಸುಪಿಸುಗುಡುತ್ತಿದ್ದುದನ್ನು ಬಿಟ್ಟರೆ, ಎಲ್ಲೊ ಆಗೊಮ್ಮೆ ಈಗೊಮ್ಮೆ ತರಗೆಲೆಗಳು ಗಾಳಿಗೆ ಹಾರಾಡುವ ಸದ್ದು ಮತ್ರ ಅಲ್ಲಿದ್ದಿದ್ದು. ಸ್ವಾಭಾವಿಕವಾಗೇ ಆ ಜಾಗ ಭಯಂಕರ ಅನಿಸುವಷ್ಟು ಭೀಕರವಾಗಿತ್ತು. ಅಲ್ಲಿ ನೂರಾರು ಮಂದಿ ಒಂದು ದನಿಗಾಗಿ ಕಾಯುತ್ತಿದ್ದರು. ಎಲ್ಲರ ಮುಖದಲ್ಲಿಯೂ ಒಂದೇ ಕುತೂಹಲ, ಒಂದು ವರ್ಷದಿಂದ ಆ ಸಂದರ್ಭಕ್ಕಾಗಿ ಕಾಯುತ್ತಿದ್ದ ಎಲ್ಲರಿಗೂ ಅದೊಂದು ಜಯಘೊಶ ರೋಮಾಂಚನ ತರುವುದಿತ್ತು. ಸಣ್ಣ ದಿಬ್ಬವನ್ನೇ ವೇದಿಕೆಯಂತೆ ಮಾಡಿ, ಅದರ ಕೆಳಬದಿಯಲ್ಲಿ ಹೋಮಕುಂಡವೊಂದನ್ನ ನಿರ್ಮಿಸಲಾಗಿತ್ತು. ಆ ಕುಂಡದಲ್ಲಿನ್ನೂ ಅಗ್ನಿ ಸ್ಪರ್ಷವಾಗಿರಲಿಲ್ಲ. ಕುಂಡದ ಎದುರುಗಡೆಯ ತೆರೆದುಕೊಂಡಿದ್ದ ಸ್ವಲ್ಪೇ ಜಾಗದಲ್ಲಿ ಅಷ್ಟೂ ಮಂದಿ ನೆರೆದಿದ್ದು. ಅಷ್ಟುಮಾತ್ರದ ತೆರೆದ ಜಗವನ್ನ ಬಿಟ್ಟರೆ ಸುತ್ತಲೂ ಕಣ್ನಿಗೆ ಕಾಣುವಷ್ಟು ದೂರಕ್ಕೂ ಕಾಡಿನ ಹೊರತಾಗಿ ಅಲ್ಲಿ ಮತ್ತೇನೂ ಇರಲಿಲ್ಲ. ವೆದಿಕೆಯಲ್ಲಿ ಮೂವರು ವಜ್ರಾಸನದಲ್ಲಿ ಕುಳಿತು ಧ್ಯಾನಸ್ಥರಾಗಿದ್ದರು. ಅವರ ಕಣ್ನುಗಳು ಮುಚ್ಚಿದ್ದರೂ, ಅಲ್ಲೊಂದು ಜ್ವಾಲೆ ಜ್ವಲಿಸುತ್ತಿತ್ತು. ಒಂದು ಶಕ್ತಿ ತಮ್ಮೊಳಗೆ ಪ್ರವಹಿಸಲೆಂದು ಅವರು ಆಹ್ವಾನಿಸುತ್ತಿದ್ದರು. ಆ ಅವಾಹನೆ ಆಗೋವರೆಗೂ ಯಾರೂ ಮಾತಾಡುವಂತಿರಲಿಲ್ಲ. ಮಾತು ಹಾಗಿರಲಿ ಗಂಟಲನ್ನ ಸರಿಪಡಿಸಿಕೊಳ್ಳುವಂತ, ನಿಟ್ಟುಸಿರಂತ, ಆಕಳಿಕೆಯಂತ ಸಹಜ ಧ್ವನಿಗೂ ಅಲ್ಲಿ ಅವಕಾಶವಿರಲಿಲ್ಲ. ಒಮ್ಮೆ ನಿಶಿದ್ಧವೆಂದಮೇಲೆ ಮುಯಿತು, ಅಘೋರಿಗಳ ಪಾಲಿಗೆ ಅದು ಎಂದಿಗೂ ಪ್ರಶಸ್ತವಾಗುವುದಿಲ್ಲ. ವೇದಿಕೆಯಲ್ಲಿನ ಮೂವರ ದಿವ್ಯ ಧ್ಯಾನಸ್ಥ ಸ್ಥಿತಿಯನ್ನ ಎವೆಯಿಕ್ಕದೇ ನೋಡುತ್ತಿದ್ದ ನೂರಾರುಮಂದಿಯ ಕಂಗಳಲ್ಲಿಯೂ, ಆವಾಹನೆಯಾಗೊ ಶಕ್ತಿಯ ಕುರಿತಾಗಿ ಅದ್ವಿತೀಯ ಭಕ್ತಿಯಿತ್ತು. ಕಾಶಾಯ ವಸ್ತ್ರದಲ್ಲಿ, ಕಯ್ಯಲ್ಲೊಂದು ಆಕರವಿರದ ಕೋಲನ್ನ ದಂಡವಾಗಿ ಹಿಡಿದಿದ್ದ ಎಲ್ಲರೂ ಆ ದಂಡವನ್ನ ನೆಲಕ್ಕೆ ತಾಕದಂತೆ ತಮ್ಮ ತಮ್ಮ ಪಾದದಗಳಮೇಲೆ ಊರಿ ನಿಂತಿದ್ದರು. ಕಟ್ಟುಮಸ್ತಾದ ಅವರ ಮೈ ಕಟ್ಟು ಬೆಳದಿಂಗಳ ಬೆಳಕಲ್ಲಿಯೂ ಹೊಳೆಯುತ್ತಿತ್ತು. ಮುಖದಲ್ಲಿ ಮಿತಿಯನ್ನ ಲೆಕ್ಕಿಸದೇ ಬೆಳೆದಿದ್ದ ಕುರುಚಲು ಗಡ್ಡ ಎದೆಯನ್ನ ದಾಟಿ ಸಾಗಿತ್ತು. ಎಣ್ಣೆ ಕಾಣದೆ ತಲೆಯಿಂದ ಚದುರಿದ ಗೊಂಚಲು ಕೂದಲು, ಭುಜವನ್ನ ತಾಕಿತ್ತು. ನೆರೆದಿದ್ದ ಆ ನೂರಾರು ಮಂದಿಯಲ್ಲಿ ತೀರಾ ಸಾಮ್ಯವಾಗಿ ಕಾಣಿಸುತ್ತಿದ್ದ ಕೆಲವು ಲಕ್ಷಣಗಳೆಂದರೆ ಇವುಗಳು ಮಾತ್ರ. ಇವುಗಳ ಹೊರತಾಗಿ, ಅವರೆಲ್ಲರ ಪ್ರಕೃತಿ, ಸ್ವಭಾವ ಹಾಗೂ ಸಧನೆಗಳು ಭಿನ್ನವೇ.

ಗುರು ಸ್ಥಾನದಲ್ಲಿ ಕುಳಿತಿದ್ದ ಮೂವರಲ್ಲೊಬ್ಬ ಅಘೋರಿ, ತನ್ನ ಆಸನವನ್ನ ಬದಲಿಸಿ ಎದ್ದು ನಿಂತ. ಕೆಳಗಿದ್ದ ಎಲ್ಲರಲ್ಲಿಯೂ ಕುತೂಹಲ ಇಮ್ಮಡಿಸಿತು. ವೇದಿಕೆಯಲ್ಲಿನ ಉಳಿದಿಬ್ಬರು, ಗುರುಸ್ಥಾನದ ಅಘೋರಿಯನ್ನೇ ಅನುಸಾರಿಸಿದರು. ಗುರುಸ್ಥಾನದ ಅಘೋರಿ "ಸುಜ್ನಾನಂದ" ಬಲಗೈ ಮುಷ್ಟಿಯನ್ನ ಆಕಶಕ್ಕೆ ಎತ್ತಿ, ಆ ಮುಷ್ಟಿಯನ್ನ ಬಿಚ್ಚಿದ.. ಚಂದ್ರನನ್ನ ಹಾದು ಸಾಗುತ್ತಿದ್ದ ಮೋಡಗಳು ತಮ್ಮನ್ನ ಯಾರೋ ನೂಕಿದವರಂತೆ, ಚಂದ್ರನಿಗೆ ಅಡ್ಡಬಾರದಂತೆ ಪಥವನ್ನ ಬದಲಿಸಿದವು. ಕೈಗಳನ್ನು ನಿಧಾನವಾಗಿ ಕೆಳಗಿಳಿಸಿದ ಸುಜ್ನಾನಂದ ತನ್ನ ಬಲಗಡೆಯಲ್ಲಿ ನಿಂತಿದ್ದ ತನ್ನ ಗುರುವನ್ನು ವಿನಮ್ರವಾಗಿ ನೋಡಿ, ಅವರೆಡೆಗೆ ಎರಡೂ ಹಸ್ತಗಳನ್ನ ಚಾಚಿ ಅಪ್ಪಣೆಯನ್ನ ಕೋರಿದ.. ಗುರು ತನ್ನ ಜೋಳಿಗೆಯಲ್ಲಿಯ ಭಸ್ಮವನ್ನ ತೆಗೆದು ಸುಜ್ನಾನಂದರ ಹಣೆಯಲ್ಲಿ ಮೆತ್ತಿದರು. ಆ ಅಪ್ಪಣೆಯನ್ನ ಸ್ವೀಕರಿಸಿದ ಸುಜ್ನಾನಂದರು ತನ್ನ ಎಡಗಡೆಯಲ್ಲಿ ದೀಕ್ಷೆಗಾಗಿ ಎದುರು ನೋಡುತ್ತಿದ್ದ "ಮುದ್ವ"ನನ್ನು ನೋಡಿದರು. ಪ್ರಕಾಶಮಾನವಾಗಿ ಕಂಗೊಳಿಸುತ್ತಿದ್ದ ಮುದ್ವನ ಮುಖದಲ್ಲಿ ತೇಜಸ್ಸು ಪ್ರವಹಿಸುತ್ತಿತ್ತು. ಸುಜ್ನಾನಂದರ ಕನಸಿನ ಕೂಸು ಮುದ್ವ. ತನ್ನಿಂದ ಮಾಡಲಾಗದ ಸಾಧನೆಯನ್ನ ಮುದ್ವನಿಂದ ಸಾಧಿಸಿ ತಾನೇ ಸಾಧಿಸಿದಷ್ಟು ಸಂತೋಷ ಪಡುವ ಕನಸು ಸುಜ್ನಾನಂದರದು. ಅವರ ದಿವ್ಯ ಮಾರ್ಗದರ್ಶನದಲ್ಲೇ ಬೆಳೆದ ಮುದ್ವ ಅವರ ಎಲ್ಲ ಕನಸನ್ನೂ ಸಾಕಾರಗೊಳಿಸುವ ಎಕೈಕ ಅಘೋರಿಯಾಗಿದ್ದ. ಆ ಸಭೆ ಏರ್ಪಾಟಾದ ಕಾರಣವೂ ಅದೇ. ಮುದ್ವನನ್ನ ಮುಂದಿನ ಅಘೋರಿ ಗುರುವಾಗಿಸುವುದು. ಅದಕ್ಕೆ ಕಾಲ ಕೂಡಿ ಬಂದಿತ್ತು. ಸುಜ್ನಾನಂದರು ತಮ್ಮ ಕೈಯಲ್ಲಿದ್ದ ದಂಡವನ್ನ ಭೂಮಿಗೆ ಸಮನಾಂತರವಾಗಿ ಹಿಡಿದು ಕಣ್ಣು ಮುಚ್ಚಿ, ಮನಸಲ್ಲಿಯೇ ಮಂತ್ರವನ್ನ ಪಠಿಸಿ ಆ ದಂಡವನ್ನ ಮುದ್ವನೆದುರು ಚಾಚಿದರು. ಆಗಲೇ ಮುದ್ವ ಕಣ್ಣು ತೆರೆದದ್ದು. ಸುತ್ತಲೂ ನೆರೆದ ದಟ್ಟ ಕಾಡಿನ, ಹೆಮ್ಮರಗಳಲ್ಲಿ ಗೂಡು ಕಟ್ಟಿ ಮಲಗಿದ್ದ ಪಕ್ಷಿಗಳೆಲ್ಲ ಒಮ್ಮೆಲೇ ಚದುರಿದವು. ಅದು ಯಾವುದೋ ಒಂದು ಅನಿಷ್ಟದ ಸೂಚನೆಯಂತಿತ್ತು. ಮುದ್ವನ ಪಟ್ಟಾಭಿಶೇಕವನ್ನೇ ಎದುರು ನೋಡುತ್ತಿದ್ದ ಎಲ್ಲ ಅಘೋರಿಗಳಿಗೂ ಅದು ಗಮನಕ್ಕೇ ಬರಲಿಲ್ಲ. ಅವರೆಲ್ಲರೂ ಉನ್ಮತ್ತ ಸ್ಥಿತಿಯನ್ನ ತಲುಪಿಯಾಗಿತ್ತು. ಆದರೆ ಸುಜ್ನಾನಂದರ ಗುರು "ಏಕನಾಥ"ರಿಗೆ ಮಾತ್ರ ಅದು ತಿಳಿಯದೇ ಇರಲಿಲ್ಲ. ಮುದ್ವನ ಭೀಕರತೆ ಅಂತಹುದು. ಮುದ್ವ ದಂಡವನ್ನ ಭಕ್ತಿಯಿಂದ ಸ್ವೀಕರಿಸಿ ಗುರುವಿಗೆ, ಪರಮ ಗುರುವಿಗೆ ತನ್ಮಯನಾಗಿ ನಮಸ್ಕರಿಸಿದ. ಏಕನಾಥರು ಮತ್ತೆ ತಮ್ಮ ಜೋಳಿಗೆಯಿಂದ ಭಸ್ಮವನ್ನ ತೆಗೆದು ಮುದ್ವನ ಹಣೆಗೆ ಮೆತ್ತಿದರು. ಮುದ್ವ ಅಲ್ಲಿಗೆ ಅಧಿಕ್ರತವಾಗಿ ಅಘೋರಗುರುವಾಗಿ ನೇಮಕಗೊಂಡಿದ್ದ. ದಿಬ್ಬದ ತುದಿಯಲ್ಲಿ ಬಂದು, ತನ್ನ ಹೆಬ್ಬೆರಳಮೇಲೆ ಪೂರ್ತಿ ಶರೀರವನ್ನ ನಿಲ್ಲಿಸಿ ಬಲಗಯ್ಯಲ್ಲಿ ದಂಡವನ್ನ ಚಂದ್ರನತ್ತ ಎತ್ತಿದ ಮುದ್ವ,  ತನ್ನೆಲ್ಲ ಶಕ್ತಿಯನ್ನ ಒಗ್ಗೂಡಿಸಿ "ಭಮ್ ಬೋಲೇ" ಎಂದು ಘೋಶಿಸಿದ.. ಅದನ್ನೇ ಕಾಯುತ್ತಿದ್ದ ಉಳಿದೆಲ್ಲ ಅಘೋರಿಗಳು ಪ್ರತಿಯಾಗಿ ಭಂ ಬೋಲೆ ಎಂದು ಜಯಘೋಷ ಮೊಳಗಿಸಿದರು. ಕಾಡಿನ ಮೂಲೆ ಮೂಲೆಗೂ ಅವರ ಧ್ವನಿ ಪ್ರತಿಧ್ವನಿಸಿತು... ಮುದ್ವ ಮತ್ತೊಮ್ಮೆ ಕಣ್ಣುಮುಚ್ಚಿ ಭಂ ಬೋಲೆಯೆಂದು ಘೋಷಿಸಿದ. ಯಜ್ನಕುಂಡದಲ್ಲಿ ತನ್ನಿಂದ ತಾನೇ ಅಗ್ನಿ ಜ್ವಲಿಸಿತು..

                    ನಡುರಾತ್ರಿ ಎರಡು ಗಂಟೆಯಲ್ಲಿ, ಅಜ್ನಾತ ಕಾಡಿನಲ್ಲಿ, ಅಘೋರಿಗಳು ಸ್ವೇಚ್ಛೆಯಲ್ಲಿ ಚೀರಿದರು. ಉದ್ರಿಕ್ತರಾಗಿ ಉನ್ಮತ್ತರಾಗಿ ಉದ್ವೇಗದಲ್ಲಿ ನಲಿದರು. ಅವರೆಲ್ಲ ಒಬ್ಬರನ್ನೊಬ್ಬರು ಅಭಿನಂದಿಸುತ್ತ, ಕೇಕೆ ಹಾಕುತ್ತ, ಜಯಘೋಷ ಕೂಗುತ್ತ ಅತೀವ ಆನಂದದಲ್ಲಿ ತೇಲುತ್ತಿದ್ದರೆ, ಏಕನಾಥರು ಮಾತ್ರ, ಮತ್ತೆ ಧ್ಯಾನಸ್ಥ ಸ್ಥಿತಿಗೆ ತೆರಳಿದ ಸುಜ್ನಾನಂದರ ಹಣೆಯಲ್ಲಿ ಕಪ್ಪಾದ ಭಸ್ಮವನ್ನೇ ಗಮನಿಸುತ್ತ ಕಣ್ಮುಚ್ಚಿದರು. ಆ ಹೊತ್ತಿಗೆ ಪಕ್ಕದ ರಾಜ್ಯದ ಬಡ ಜಿಲ್ಲೆಯ ಕುಗ್ರಾಮದಲ್ಲಿ, ವೇಶ್ಯೆಯೊಬ್ಬಳು ಗಂಡುಮಗುವನ್ನ ಹಡೆದಿದ್ದು ಅವರಿಗೆ ಕಾಣಿಸಿತು.

Monday, 24 September 2012

ಭಂ ಬೋಲೆ...



ನಮಗೆ ಕಾಣುತ್ತಿರುವ ನಿಜವೆಲ್ಲವೂ ಸುಳ್ಳೆಂಬುದೇ ಸತ್ಯ....

ಅಘೊರಿ ಎಂಬ ಸಾಮಜಿಕರಲ್ಲದ, ತೀರಾ ವಿಚಿತ್ರವೆನಿಸುವ ಜೀವನಶೈಲಿಯ, ಕಲ್ಪನಾತೀತವೆನಿಸಿದರೂ, ವಾಸ್ತವಿಕವಾಗಿ ಸಜೀವವಾಗಿರುವ ಈ ಸಮುದಾಯದ ಚಟುವಟಿಕೆಗಳನ್ನ ಗಮನಿಸಿದ ನನಗೆ...ಅವರ ಮೇಲೆ ಎಲ್ಲಿಲ್ಲದ ಕುತೂಹಲ ಮೂಡಿದೆ. ಶವ ಶಯನ, ಶವ ಭೋಜನ ಮತ್ತು ಶವ ಮೈಥುನ ಎಂಬ ಮೂರು, ಊಹೆಗೂ ನಿಲುಕದ ಸಂಪ್ರದಾಯ ಹೊಂದಿರುವ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೊ ಚಪಲ ಶುರುವಾಗಿದೆ. ಮನಸಲ್ಲಿ ಸೃಜಿಸಿದ ಸಣ್ಣ ಎಳೆಯೊಂದು, ಕತೆಯಾಗಿ ಸಿದ್ದವಾಗುತ್ತಿದೆ..
 "ಭಂ ಬೋಲೆ" ಯಾಗಿ.
Quantum physics,ಹಿಂದು ಧರ್ಮ, ಮತ್ತು ಶಂಕರಾಚಾರ್ಯರ ಬರಹಗಳ ತಿರುಳನ್ನ ಬಳಸಿಕೊಂಡು, ಹೀಗೊಂದು ಕತೆ ತಲೆಯಲ್ಲಿ ಕೊರೆಯಲು ಶುರುವಾಗಿ ಅನೇಕ ತಿಂಗಳುಗಳೇ ಕಳೆದಿವೆ. ಸೋಮಾರಿತನವೊ, ಪೂರ್ತಿ ಹಿಡಿತ ಸಿಗದ ವಿಷಯವೋ, ಅಥವ ಇದನ್ನು ಬರೆಯಲು ನಾನು ತೀರ ಸಣ್ನವನೆಂಬ ಕೀಳರಿಮೆಯೊ ಗೊತ್ತಿಲ್ಲ. ಇಷ್ಟು ದಿನವೂ ಅದು ಬರಿಯ ಎಳೆಯಾಗಿಯೇ ಮನಸಲ್ಲಿತ್ತು. ಈಗ ಈ ಎಳೆಗೆ ಹೆರಿಗೆ ಸಮಯ. ಇನ್ನೂ ಅದು ಎಳೆಯಾಗಿಯೇ ಇರಲು ಅವಕಾಶವಿಲ್ಲವಾಗಿ ಅದು ಕತೆಯಾಗಿ ಹೊರಬರುತ್ತಿದೆ. ಬರೆಯುವ ಪ್ರಯತ್ನ ನನ್ನದು. ಮುಂದಿನದು ನಿಮ್ಮ ಪಾಲಿಗೆ. 

Friday, 14 September 2012

ಕೈ ಸುಟ್ಟ ಸಿಗರೇಟು....


ಪೂರ್ತಿ ಮುಗಿಯದೇನೇ...


"ಕಾಲೇಜಿನಲ್ಲಿ ಕ್ಲಾಸು ಮುಗಿಯುತ್ತಿತ್ತೊ ಇಲ್ಲವೊ, ಆದರೆ ಮನಸಿಗೆ ಮಾತ್ರ ಕ್ಲಾಸು ಮುಗಿದು ಶಟ್ಟರ ಅಂಗಡಿಯ ಸಿಗರೇಟಿನ ತುದಿಯಲ್ಲಿಯ ಕೆಂಡ, ಕಣ್ಣು ಕುಕ್ಕುತ್ತಿತ್ತು. ಶೋಕಿಗಾಗಿ ತೀಟೆಗಾಗಿ ಶುರುವಾದ ಚಟವಲ್ಲ ಸಿಗರೇಟು. ಅಪ್ಪಟ ಹವ್ಯಾಸವದು ನನಗೆ. ಶಟ್ಟರ ಗೂಡಂಗಡಿಗೆ ಪೇಪರ್ಮೆಂಟ್ ತಿನ್ನಲು ಬರುತ್ತಿದ್ದ ಮಕ್ಕಳಿಗೆಲ್ಲ ನಾನು ಸಿಗರೇಟಿನ ಹೊಗೆಯನ್ನ ಸುರುಳಿ ಸುರುಳಿಯಾಗಿ ಬಿಡುವುದನ್ನ ನೋಡುವುದೇ ರೋಮಾಂಚನಕಾರಿ ವಿಷಯವಾಗಿತ್ತು. ನಾನೂ ಅಷ್ಟೇ, ಅವರ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಲು,ಹೊಗೆಯನ್ನ ಉಂಗುರಾಕಾರದಲ್ಲಿ ಬಿಡುತ್ತ,ಓಲಂಪಿಕ್ ಚಿನ್ಹೆ ರಚಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಕೊನೆಯ ಬಳೆಯನ್ನ ಕೂಡಿಸುವುದರೊಳಗಾಗಿ ಮೊದಲ ಬಳೆ ಕರಗಿಹೋಗುತ್ತಿತ್ತು. ಕಡೆವರೆಗೂ ಓಲಂಪಿಕ್ ಚಿನ್ಹೆ ನನಗೊಲಿಯಲೇ ಇಲ್ಲ. ಭಾರತಕ್ಕೆ ಸಿಗದ ಬಂಗಾರದಂತೆ.

              ಹುಡುಗಿ ಸಿಕ್ಕಿದಳು, ನನ್ನನ್ನೇ ಪ್ರೀತಿಸುವುದಾಗಿ ಹಠ ಹಿಡಿದಳು.ಹೇಗೆ ನನಗೆ ಸಿಗರೇಟನ್ನ ಬಿಡಲಾಗಲಿಲ್ಲವೋ ಹಾಗೆಯೇ ಅವಳಿಗೂ ನನ್ನ ನಾನಿದ್ದಂತೆಯೇ ಪ್ರೀತಿಸಲಾಗಲಿಲ್ಲ. ನನ್ನನ್ನ ಬದಲಾಯಿಸುವುದಾಗಿ, ಮೊದಲು ಸಿಗರೇಟನ್ನ ಬಿಡಬೇಕೆಂದು ರಂಪ ಮಾಡಿದಳು. ನಾನೂ ನೋಡುವಷ್ಟು ನೋಡಿ ಹಿಂಸೆಯನ್ನ ತಡೆಯಲಾಗದೆ ಬಿಡುವುದಾಗಿ ತೀರ್ಮಾನಿಸಿದೆ. ಸಿಗರೇಟನ್ನಲ್ಲ, ಅವಳನ್ನ. ಬೆಂಕಿ ಕಡ್ಡಿ ಗೀರುವುದರಿಂದ ಹಿಡಿದು, ಸಿಗರೇಟನ್ನ ಹೊತ್ತಿಸಿ ಮೊದಲ ದಮ್ ಹೀರುವಾಗಿನ ಮಜವೇ ನನ್ನನ್ನ ಪದೇ ಪದೇ ಸಿಗರೇಟಿಗೆ ದಾಸನನ್ನಾಗಿ ಮಾಡಿದ್ದು. ಗೆಳೆಯರ ಬಳಗದಲ್ಲಿ ನನ್ನ ಸಿಗರೇಟಿನ ಚಟದ ಬಗ್ಗೆ ವಿಶೇಷವಾದ ಸ್ಥಾನವಿದೆ. ನಾನು ಎಂದೂ ಇನ್ನೊಬ್ಬರ ಹಣದಲ್ಲಿ ಚಟ ಮಾಡಲಿಲ್ಲ. ಮತ್ತೊಬ್ಬನಿಗೆ ಸಿಗರೇಟ್ ಸೇದೆಂದು ಪೀಡಿಸಲಿಲ್ಲ. ನನ್ನ ಮೋಜು ನನ್ನ ಮಜಗಳಿಗಾಗಿ ಮಾತ್ರ ಸಿಗರೇಟು ನನ್ನ ಆಸಕ್ತಿಯ ವಸ್ತುವಾಗಿತ್ತು.

ಹೊಗೆ ನನ್ನ ಎದೆಯೊಳಗೆ ನುಸುಳುತ್ತಿದ್ದ ಹಾಗೆ ನಾನು, ನನಗೆ ಬೇಕಾದ ನಾನಾಗುತ್ತಿದ್ದೆ. ಆಗ ನನ್ನನ್ನ, ಯಾರು, ಏನೇ ಪ್ರಶ್ನಿಸಿದರೂ, ನನ್ನಿಂದ ಯಾವ ಪ್ರತಿಕ್ರಿಯೆಯೂ ಬರುತ್ತಿರಲಿಲ್ಲ. ಅಸಲಿಗೆ ನಾನು ವಾಸ್ತವದಲ್ಲೇ ಇರುತ್ತಿರಲಿಲ್ಲ. ಎದ ಬಿಗಿಯಾಗಿ ಭಾರವಾಗಿ, ಉನ್ಮತ್ತ ಮನಸು ಲಗಾಮಿಲ್ಲದೆ, ಕಲ್ಪನೆಯಲ್ಲಿ ತೇಲಾಡುವಾಗಲೇ ಎಂದೂ ಬಾರದ ಭಾವಗಳು ನನ್ನನ್ನ ಬಿಗಿದಪ್ಪುತ್ತಿದ್ದವು. ವಿಚಲಿತಗೊಳ್ಳದ ಅನಿರ್ವಚನೀಯ ಭಾವ ಸ್ಪಂದನೆಗಳನ್ನ ನಾನು ಕಂಡಿದ್ದೇ ಧೂಮದಲ್ಲಿ ಮುಳುಗಿದಾಗ. ನಾವೇ ಹಾಕಿಕೊಂಡ ಬೇಲಿಗಳು, ಪ್ರತಿಕ್ಷಣ ಅದನ್ನು ಮುರಿದುಹಾಕಲು ನಾವೇ ಪ್ರಯತ್ನಿಸುವುದು, ಅನಂತದವರೆಗೆ ಬೆಳೆಯೊ ಆಕಾಂಕ್ಷೆ ಹೊಂದಿ, ಒಳಗೊಳಗೇ ಅಂತರವನ್ನ ಬೆಳೆಸಿಕೊಳ್ಳುವುದು, ನಮ್ಮಮೇಲೆಯೇ ಅನುಮಾನ, ಅಸಹ್ಯೆ, ಜಿಗುಪ್ಸೆಗಳಿದ್ದರೂ ನಮ್ಮ ಪ್ರತಿ ಸೋಲುಗಳಿಗೆ ಇನ್ನೊಬ್ಬರ ನೆರಳನ್ನ ಗುರುತುಮಾಡುವುದು, ಅನುದಿನ ಸಾಯುವುದು, ಬದುಕಿರುವಂತೆ ಶರೀರವನ್ನ ಚಲಿಸುವುದು,ತಲೆ ಬುಡ ಎರಡೂ ಇಲ್ಲದ, ಸಲ್ಲದ ಹರಟೆಗಳಲ್ಲಿ ಸದಾ ಸುಖವನ್ನ ಕಾಣುವುದು, ನಿನ್ನೆಗಳನ್ನ ನೆನೆಯುತ್ತ, ಇವತ್ತನ್ನು ಕಳೆಯುತ್ತ, ನಾಳೆಯನ್ನ ಅಳೆಯುವುದು, ಮಗ್ಗಿಯೂ ಬಾರದವನು ಬೀಜಗಣಿತವನ್ನ ಬಿಡಿಸಿದಂತೆ, ತನ್ನ ವಿಧಿಯನ್ನ ಶಪಿಸುವುದು, ಉತ್ತರವೇ ಇಲ್ಲದ ಪ್ರಶ್ನೆಗಳನ್ನ ಕೇಳುತ್ತ, ಉತ್ತರಿಸಲಾಗದವರನ್ನ ದಡ್ಡರೆಂದು ತೀರ್ಮಾನಿಸುವುದು, ಹೀಗೆ ಹೇಳಲಾಗದಷ್ಟು, ಹುಳುಕು ಕೊಳಕುಗಳು ನನ್ನನ್ನ ತೀವ್ರವಾಗಿ, ಬಲವಂತವಾಗಿ ಕಾಡಿದ್ದೇ ಸಿಗರೇಟಿನ ಅಮಲಲ್ಲಿ ತೇಲಿದಾಗ...

ಕೆಲವು ಬೇಡದ, ಬೇಕೇಬೇಕಾದ ಸಬಂಧಗಳನ್ನ, ಸ್ನೇಹವನ್ನ, ಸಹನೆಯನ್ನ, ಸಂತೋಷವನ್ನೆಲ್ಲ ಸಿಗರೇಟಿನಿಂದಾಗಿ ಕಳೆದುಕೊಂಡೆ. ಸಿಗರೇಟನ್ನ ಸಿಕ್ಕಿಸುವ ಕೈ ಬೆರಳ ಸಂಧಿ ಬದಲಾಯ್ತೆ ವಿನಹ ನಾನು ಬದಲಾಗಲಿಲ್ಲ. ಬಾಯಲ್ಲಿ ಹೊಗೆ ಬಂದಾಗಲಿಲ್ಲ. ಸಿಗರೇಟನ್ನ ಸೇದುವುದು ನನ್ನತನ ಎಂದು ಭಾವಿಸಿದ್ದ ನನಗೆ, ಸಿಗರೇಟು ಬಿಡುವುದು ಸರಿಯೋ, ಅಥವಾ ಅದನ್ನು ಬಿಟ್ಟು ನನ್ನತನ ಕಳೆದುಕೊಳ್ಳುವುದು ತಪ್ಪೊ ಎಂಬುದು ಬಗೆಹರಿಯದ ಸಮಸ್ಯೆಯಾಗಿ ಕಾಡಿತು. ಕೆಲವು ಇಕ್ಕಟ್ಟಿನಲ್ಲಿ ಆನಂದವಿದೆಯಾದರೂ, ತರಾತುರಿಯ ಅನಿವಾರ್ಯತೆಯಲ್ಲಿ ಯಾವ ಆನಂದವೂ ಇಲ್ಲ. ಕಡೆಗೂ ನನ್ನ ಪಾಲಿಗೆ ಅಂಥದೊಂದು ಅನಿವಾರ್ಯತೆ ಬಂದೇ ಬಿಟ್ಟಿತು.

ಹವ್ಯಾಸವಾಗಿದ್ದ ವಿಷಯ ಚಟವಾಯ್ತು, ಅಧೀನದಲ್ಲಿದ್ದ ಚಟ ಅಧಿಕಾರಿಯಾಯ್ತು, ಕಡೆಗೆ ನನಗೆ ಸಿಗರೇಟು ಬೆಕೆಂದಲ್ಲ, ಸಿಗರೇಟಿಗೆ ನಾನು ಬೆಕೇಬೆಕೆಂಬ ಸ್ಥಿತಿ ಬಂದುಹೋಯ್ತು. ತುಟಿ ಕಪ್ಪಾಯ್ತು, ಸಿಕ್ಕ ಇನ್ನೊಬ್ಬಳು ಗೆಳತಿ ಮುತ್ತನ್ನ ನಿರಾಕರಿಸಿದಳು, ಮನಸು ವಿಚಲಿತವಾಯ್ತು, ಗೆಳೆಯರು ದುರವಿಡಲು ಶುರುಮಾಡಿದರು, ಏನನ್ನಾದರೂ ಬರೆದು, ಬದುಕಿಗೊಂದು ದಾರಿಮಾದಿದ್ದ ಕೈಗಳು ಅದುರಿದವು, ಎದೆಯಲ್ಲಿ ಪ್ರತಿದಿನ ಕನಸುಗಳು ಸತ್ತಂತೆ ಚೀರುತ್ತಿದ್ದವು, ಹಾಗೆಯೇ ಸಾಯುತ್ತಿದ್ದವು, ಪ್ರಶ್ನೆಗಳು ಶುರುವಾದವು, ಕತ್ತಲೆಗಳು ಹೆಚ್ಚಾದವು, ಸಿಗರೇಟನ್ನ ಬರಿಯ ಮೋಜೆಂದು ಭಾವಿಸಿದ್ದ ನನಗೆ ಅದು ಹಾಗಲ್ಲವೆಂಬ ಸತ್ಯ ಅರಿವಾಗಿ ಜ್ನಾನೋದಯವಾಗೊ ಅವಕಾಶ ಮುಗಿದುಹೋಯ್ತು. ಯಾಕೆಂದರೆ ತಿಂಗಳುಗಟ್ಟಲೆ, ಆಸ್ಪತ್ರೆಯಲ್ಲಿ ಮಲಗಿದಮೇಲೆ,ಡಾಕ್ಟರ್ ಹೇಳಿದರು" ಈಗ ನಿನ್ನ ಎದೆಯಲ್ಲಿ ಮೂರು ರಂಧ್ರಗಳಾಗಿವೆ, ಅವುಗಳನ್ನ ಮುಚ್ಚುವುದು, ಅಥವಾ ಸರಿ ಮಾಡುವುದು ಆಗದ ಮಾತು, ಹೇಳಲೇಬೇಕಾದ ಅನಿವಾರ್ಯತೆಯಲ್ಲಿ ನಾನಿರುವುದರಿಂದ ಹೇಳುತ್ತಿದ್ದೇನೆ, ನಿನ್ನಲ್ಲಿ ಹೆಚ್ಚು ದಿನಗಳು ಉಳಿದಿಲ್ಲ"ಎಂದು. ಡಾಕ್ಟರ್ ಹೇಳಿದ ಮೂರು ರಂಧ್ರಗಳೆಂಬ ವಾಕ್ಯ ಮತ್ತೆ ಮನಸಿಗೆ ಪ್ರತಿಧ್ವನಿಸಿದಾಗ ನಾನು ಎದೆಯನ್ನ ಮುಟ್ಟಿಕೊಳ್ಳಲಿಲ್ಲ. ಬದಲಾಗಿ ಸಿಗರೇಟು ಹಿಡಿಯುತ್ತಿದ್ದ ಬೆರಳುಗಳನ್ನ ನೋಡಿದೆ. ಎಂದೂ ಕಾಣದ ಸುಟ್ಟ ಕಲೆಗಳು ಆ ಬೆರಳ ಸಂಧಿಗಳಲ್ಲಿ ಅಂದು ಕಾಣಿಸಿದಂತೆ ಭಾಸವಾಯ್ತು. ಆಗಲೇ ಖಾತ್ರಿಯಾಗಿದ್ದು ಸಿಗರೇಟು ಕೈ ಸುಟ್ಟಿದೆಯೆಂದು".
ಇದು ತನ್ನ ಕೊನೆಯ ಬರಹವೆಂದು ಸಾಯುವ ಹಾಸಿಗೆಯಮೇಲೇ ಹಾಳೆಯನ್ನ ತರಿಸಿಕೊಂಡು, ಹೀಗೆ ಬರೆದ ನನ್ನ ಸ್ನೇಹಿತನ ಕೈಯಲ್ಲಿ ಸಾಯುವಾಗಲೂ ಸಿಗರೇಟಿತ್ತು. ಸುಟ್ಟ ಕಲೆಗಳೂ ಸಹ....

Thursday, 13 September 2012

ಕಡೆಗೆ ಬಯಸಿದ್ದನ್ನೇ ಮಾಡುವ ನಾವು ಸಲಹೆ ಕೇಳುವುದ್ಯಾಕೆ?.......

ಕಡೆಗೆ ಬಯಸಿದ್ದನ್ನೇ ಮಾಡುವ ನಾವು ಸಲಹೆ ಕೇಳುವುದ್ಯಾಕೆ?.......


ಮನೆಗೆ ಹೊರಟಿದ್ದ ನನಗೆ ಎಂದಿನಂತೆ ಕವಲು ಹಾದಿಯೋದು ತೆರೆದುಕೊಂಡಿತು. ಎರಡೂ ಹಾದಿಯು ನನ್ನನ್ನ ಮನೆ ತಲುಪಿಸುತ್ತದೆ. ಆದರೆ ಎಡಬದಿಯ ಹಾದಿ ಅವಳ ಮನೆಯೆದುರೇ ಸಾಗುತ್ತದೆ. ಅವಳು ಒಮ್ಮೊಮ್ಮೆ, ಈ ಸಂಜೆ ಹೊತ್ತಿನಲ್ಲಿ ಅಂಗಳದಲ್ಲಿ ಹೂಗಿಡಗಳಿಗೆ ನೀರೆರೆಯಲು ಹೊರಬರುವುದುಂಟು. ಹಾಗೆ ಸುಳಿಯುವಾಗ ಅವಳನ್ನೊಮ್ಮೆ ನೋಡುವುದೇ ಪರಮಾನಂದ.ಆದರೆ ಬಲಗಡೆಯ ಹಾದಿ ಇನ್ನೊಂದು ಹಾದಿಗಿಂತ ಬೇಗ ಮನೆಗೆ ಸಾಗುತ್ತದೆ. ಹಾಗಾಗಿ ಯಾವ ಹಾದಿಯಲ್ಲಿ ಹೋಗಲೆಂಬ ಗೊಂದಲ ಶುರುವಾಗಿ ನಾಣ್ಯ ಚಿಮ್ಮಿದೆ. ನಾಣ್ಯ ಗಾಳಿಯಲ್ಲಿ ಗಿರ್ರನೆ ತಿರುಗುವಾಗ ನನಗೆ ಸಹಮತವಿದ್ದ ಕಡೆಯಲ್ಲೇ ಸಾಗುವಂತೆ ಅದು ಬೀಳಲಿ ಎಂದು ಮನಸು ಬಯಸಿತ್ತು. ಯಾವ ದಾರಿಯೆಂಬ ಗೋಜು ಬೇಡ, ನಿರ್ಧಾರವೆಂಬ ಜವಾಬ್ದಾರಿ ಬೇಡ ಎಂಬ ಕಾರಣದಿಂದಲೇ ನಾಣ್ಯ ಚಿಮ್ಮಿದರೂ, ತನಗೆ ಬೇಕಾದಂತೆಯೇ ಅದು ಬೀಳಲಿ ಎಂಬ ಭಾವ ಮನಸಿನ ದೌರ್ಬಲ್ಯವನ್ನ ತೋರಿಸಿತು. ತಿರುಗುವಷ್ಟು ತಿರುಗಿ ಯಾವುದೋ ಒಂದು ಮುಖ ಮೇಲಾಗಿ ನಾಣ್ಯ ಕೆಳಗೆ ಬಿತ್ತು. ನಾಣ್ಯದ ಫಲಿತಾಂಶವನ್ನು ನೋಡುವ ಕುತೂಹಲ ಉಳಿದಿರಲಿಲ್ಲ. ಬಿದ್ದ ನಾಣ್ಯವನ್ನ ಅಲ್ಲಿಯೇ ಬಿಟ್ಟು ಯಾವ ಹಾದಿಯಮೇಲೆ ಮೋಹವಿತ್ತೊ ಅದನ್ನೇ ಆಯ್ಕೆಮಾಡಿಕೊಂಡೆ.

             ನಾಣ್ಯ ಕೈಯಿಂದ ಚಿಮ್ಮಿ, ನೆಲಕ್ಕೆ ಬೀಳುವಷ್ಟು ಸಣ್ಣ ಸಮಯದಲ್ಲಿ ಎಂಥ ಬದಲಾವಣೆಯನ್ನ ಕಂಡೆ. ಆ ಕವಲು ದಾರಿ ಬರಿಯ ಎರಡು ಹಾದಿಯಾಗಿರಲಿಲ್ಲ, ನನ್ನಪಾಲಿಗದು ಬುದ್ಧನ ಬೋಧಿವೃಕ್ಷವಾಗಿಹೋಯ್ತು. ನನ್ನದೇ ಮನಸಿನ ಹುಣ್ಣು ಕಣ್ಣೆದುರೇ ಕಾಣಿಸಿತು. ಾಅಯ್ಕೆಮಾಡಿಕೊಂಡ ಹಾದಿಯಲ್ಲಿ ಬರುವಾಗ ಕಲಿತ ಪಾಠದ ತಿರುಳನ್ನೇ ಮೆಲುಕುತ್ತ ಬಂದೆ. ಹೆಗ್ಡುಲಾ ಬಿದ್ದರೆ ಬಲಗಡೆಯ ಹಾದಿ ಟೇಯ್ಲ್ ಬಿದ್ದರೆ ಎಡಗಡೆಯ ಹಾದಿ ಎಂದು ಊಹಿಸಿದ್ದೆ. ಮನಸ್ಸಿನಲ್ಲಿ ಎಡಗಡೆಯ ಹಾದಿಯಬಗ್ಗೆ ಹೆಚ್ಚು ಒಲವಿತ್ತು. ಯಾಕೆಂದರೆ ಒಲವ್ ಅದೇ ಹಾದಿಯಲಿ ಶುರುವಾಗುವ ಸಂಭವವಿತ್ತು. ಅವಳು ನನ್ನ ಎಣಿಕೆಯಂತೆ ಡೇರೆ ಹೂಗಳನ್ನ ಮೀಟುತ್ತ ನೀರೆರೆಯುತ್ತ ಓಡಾಡಿಕೊಂಡಿದ್ದಳು. ಅವಳು ಕಾಣುವಷ್ಟು ಹೊತ್ತೂ ನನ್ನ ಕಣ್ಣು ದಾರಿಯನ್ನ ನೋಡಲಿಲ್ಲ. ಇನ್ನೇನು ನಾನು ಮರೆಯಾದೆ ಅನ್ನುವಾಗ ಅವಳು ನನ್ನನ್ನ ಗುರುತಿಸಿದಳು ಅನಿಸುತ್ತದೆ. ಯಾಕಂದರೆ ಸ್ವಲ್ಪ ದೂರವೇ ಅನಿಸಿದರೂ ಅವಳು ಸೌಹಾರ್ದವಾಗಿ ನಕ್ಕಿದ್ದು ನನಗೆ ಸ್ಪಷ್ಟವಾಗಿ ಕಾಣಿಸಿತು. ಅದೇ ನನ್ನಪಾಲಿನ ಗೆಲುವು. ಹುಡುಗಿರ ನಗು ಹುಡುಗರಿಗಲ್ಲದೇ ಇನ್ನಾರಿಗೆ ತಾನೇ ಸರಿಯಾಗಿ ಕಾಣಿಸುತ್ತದೆ ಹೇಳಿ.. ಅವರು ನಗುವುದೇ ನಮಗಾಗಲ್ಲವೇ...

             ಗೆದ್ದ ಹೆಮ್ಮೆಯಲ್ಲಿ ನಾನೂ ನಗುಮುಖದಲ್ಲಿ ಮನೆ ತಲುಪಿದೆ. ನಾನು ಬಂದ ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಬಂದ ನನ್ನ ತಮ್ಮ ಕವಲು ಹಾದಿಯಲ್ಲಿ 5ರೂ ನಾಣ್ಯ ಸಿಕ್ಕಿತೆಂದು ಹೇಳಿದ. ಮತ್ತೆ ಕುತೂಹಲ ಕೆರಳಿದ್ದರಿಂದ "ನೀನು ನಾಣ್ಯ ಹೆಕ್ಕುವಾಗ ಹೆಡ್ ಬಿದ್ದಿತ್ತೋ, ಟೇಯ್ಲೊ?" ಎಂದು ಕೇಳೀದೆ.ಅವನು ಸ್ವಲ್ಪ ತಡೆದು ನೆನಪಿಸಿಕೊಂಡು ಹೇಳಿದ "ಟೇಯ್ಲ್" ಎಂದು.

Wednesday, 12 September 2012

ಒಂದು ಹನಿ.....




ಒಂದು ಹನಿ.....


ಕಣ್ಣಂಚ ಸವರಿದ ಒಂದು ಹನಿ
ಎಲ್ಲಿ ಬಿತ್ತೊ ನಾ ಕಾಣೆ.
ಅದರೆಡೆಗೆ ಗಮನವಾದರೂ ಎಲ್ಲಿತ್ತು?
ಕೋಟಿಮಂದಿ ನೆರೆದ ಸಭೆಯ
ವಿಜ್ರಂಭಣೆಯ ಭವ್ಯತೆಗೆ
ಭಾವಚಿತ್ರದ ಬೆಳಕಿನ ಮಳೆಗೆ
ನನ್ನ ಕಣ್ಣು ಕುರುಡಾಗಿತ್ತೊ ಏನೊ
ನನ್ನನಗಲಿದ ಆ ಹನಿ ಕಾಣಲೇ ಇಲ್ಲ.
            ರತ್ನಗಂಬಳಿ ಹಾಸಿದ ಮಾರುದ್ದದ ವೇದಿಕೆ
            ವಜ್ರಖಚಿತ ಆಸನದಮೆಲೆ ಬಣ್ಣದ ದೀಪಗಳ ಹೊದಿಕೆ,
            ನನಸೇ ಆದರೂ ಕನಸೆಂಬಂತಿತ್ತು,
            ಕನಸೇ ನನಸಾಗಿತ್ತು.
ಕಿವಿಗಡಚಿಕ್ಕುವ ಕರತಾಡನ
ಅಭಿಮಾನದಿ ಉಕ್ಕೇರಿದ ತಾಳವಿರದ ನರ್ತನ,
ಕೇಕೆ ಸಿಳ್ಳೆಗಳ ನಡುವೆ ಮಾತಿಗೆ ನಿಂತಿದ್ದೆ.
ಗಂಟಲ ಪಸೆ ಆರಿಹೋಗಿತ್ತು.
ಪ್ರಶಸ್ತಿ ಹಿಡಿದಿದ್ದ ಕೈ
ಒಂದೇ ಸಮನೆ ನಡುಗುತ್ತಿತ್ತು.
"ನಲ್ಲೆಗೊಂದು ದಿನ ಹೇಳಿದ್ದೆ,
ಅವಳ ಒತ್ತಾಯಕೆ ಮಣಿದು
ಪ್ರೀತಿಗುಡುಗೊರೆ ಕೇಳಿದ್ದಕ್ಕೆ,
'ಸುರಿವ ಒಂದು ಹನಿಯೆಂದು'
ಅವಳು ನಗಲೇ ಇಲ್ಲ ಅವಳಿಗದು ಹಿಡಿಸಲೇ ಇಲ್ಲ.
ಬಹುಮಾನ ನೀಡಲಾಗದ ಬಡವ ನಾನೆಂದು
ನನ್ನೊಂದಿಗೆ ಉಳಿಯಲೇ ಇಲ್ಲ.
                   ದಡ್ಡಿಯವಳು
                   ಹನಿಹಿಂದಿನ ಹಿರಿದಾಸೆ ತಿಳಿಯದೆ
                   ಅದನ್ನ ಪಡೆವ ಸಂದರ್ಭ ಅರಿಯದೆ
                   ಕೈ ಬೀಸಿ ಕಾಣೆಯಾದಳು ಯಾವುದೊ
                   ಸಿರಿವಂತನ ತೆಕ್ಕೆಯೊಳಗೆ ಕರಗಿ.
ಅವಳು ಹೋದರೇನನಂತೆ
ಅವಳಿಗಾಗೇ ಕಂಡಿದ್ದ ಕನಸು
ಕೈ ಹಿಡಿದು ನಡೆಸಿತ್ತು.
ಅದೇ ನನ್ನ ನಿಮ್ಮೆದುರು ನಿಲ್ಲಿಸಿದೆ."
ಹೇಗೋ ತಡವರಿಸಿ ಇಷ್ಟು ಮಾತನಾಡಿದ್ದೆ.
ಭಾವಸಹಿತ ಚಪ್ಪಾಳೆ ಪ್ರವಾಹದಲ್ಲಿ
ನನ್ನ ದನಿ ಕಿರಿದಾಗಿತ್ತು.
ನನ್ನಎದುರ ಜನಸ್ತೋಮ ಎದ್ದು ನಿಂತಿತ್ತು.
ಏನು ಬಂದರೆ ಏನು
ಅವಳು ನನ್ನೊಂದಿಗಿಲ್ಲ,
ಒಮ್ಮೆ ಈ ಸಾಗರದಲ್ಲಿ ಅವಳಿದ್ದರೂ ಇರಬಹುದು,
ಆದರೀಗ
ಕೊಡಬಯಸಿದ್ದ ಹನಿಯಾಗಲೀ
ಕೊಡುವ ಮನಸಾಗಲೀ
ನನ್ನೊಂದಿಗಿಲ್ಲ, ನನಗಿಲ್ಲ